ಕಲ್ಪತರು ಪ್ರಥಮ ದರ್ಜೆ ವಿಜ್ಞಾನ ಕಾಲೇಜು

ತಿಪಟೂರು-572201, ಕರ್ನಾಟಕ, ಭಾರತ

ಮೂರನೇ ಆವೃತ್ತಿ ಯಲ್ಲಿ 'ನ್ಯಾಕ್' ನಿಂದ ಪುನರ್ಮೌಲ್ಯೀಕರಣಕ್ಕೊಳಪಟ್ಟು "ಎ"ಶ್ರೇಣಿ ಶ್ರೇಯಾಂಕ ಪಡೆದಿದೆ,
ತುಮಕೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿದೆ ಹಾಗೂ ಯುಜಿಸಿ ಯಿಂದ 12(B),2(f)ಮಾನ್ಯತೆಗೊಂಡಿದೆ.

 

ರಸಾಯನಶಾಸ್ತ್ರ

ಈ ವಿಭಾಗವೂ ಕೂಡ 1962ರಲ್ಲಿ ಪ್ರಾರಂಭಗೊಂಡಿದ್ದು, ಅಧ್ಯಾಪಕರು ಅಧ್ಯಾಪನದ ಜೊತೆಗೆ ಸಂಶೋಧನೆ ಯಲ್ಲಿ ತೊಡಗಿಕೊಂಡಿದ್ದಾರೆ.ವಿಭಾಗದ ವತಿಯಿಂದ 2015ನೇ ಸಾಲಿನಲ್ಲಿ "ರಸಾಯನಶಾಸ್ತ್ರದ ವ್ಯಾಖ್ಯಾನದಲ್ಲಿ ನ್ಯಾನೋ ತಂತ್ರಜ್ಞಾನ" ಎಂಬ ವಿಷಯದ ಮೇಲೆ ಯು.ಜಿ.ಸಿ. ಅನುದಾನಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ನಡೆಸಲಾಯಿತು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಜರ್ನಲ್ ಗಳಲ್ಲಿ ಕೆಳಕಂಡಂತೆ ಅಧ್ಯಾಪಕರ ಸಂಶೋಧನಾ ಪ್ರಬಂಧಗಳು ಪ್ರಕಟವಾಗಿವೆ:

ಡಾ.ಎ.ಎಂ.ಶಿವಣ್ಣ-6
ಡಾ. ಜಗದೀಶಪ್ಪ-5
ಶೈಲಜ.ಎಂ.ಬಿ.-2
ಈ ವಿಭಾಗಕ್ಕೆ ಭೇಟಿ ನೀಡಿರುವ ಖ್ಯಾತನಾಮರು:
೧.ಡಾ.ಇ.ಟಿ.ಪುಟ್ಟಯ್ಯ, ಕುಲಪತಿ, ಗುಲ್ಬರ್ಗ ವಿಶ್ವವಿದ್ಯಾಲಯ
೨. ಡಾ.ಕೆ.ಎಸ್.ನಾಗಭೂಷಣ, ಟಾಟ ಇನ್ನೋವೇಟಿವ್ ಸೆಂಟರ್, ಪೂನ
೩. ಡಾ.ಶಿವಕುಮಾರ್, ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು
೪. ಡಾ.ನಾಗಭೂಷಣ, ಎಂ.ಎಸ್.ಆರ್.ಐ.ಟಿ, ಬೆಂಗಳೂರು
೫. ಡಾ.ಚಿದಾನಂದ ಶರ್ಮ, ಬೆಂಗಳೂರು ವಿ.ವಿ.
೬.ಡಾ.ಎ.ಆರ್.ಶಿವಕುಮಾರ್, ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು
೭. ಟಿ.ಎಂ.ಸ್ವಾಮಿ, ಉದ್ಯಮಿ.

ರಸಾಯನ ಶಾಸ್ತ್ರ ವಿಷಯದಲ್ಲಿ ಉತ್ತಮ ಫಲಿತಾಂಶ ಬರುತ್ತಿದ್ದು, ಶೇಕಡವಾರು ಪ್ರಮಾಣದ ತೇರ್ಗಡೆಯನ್ನು ಕೋಷ್ಟಕದಲ್ಲಿ ನೀಡಲಾಗಿದೆ.ಹಾಗೂ ಕಳೆದ ಐದು ವರ್ಷಗಳಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿರುವವರ ಶೇಕಡವಾರು ಕೋಷ್ಟಕ ನೀಡಲಾಗಿದೆ. ವಿಭಾಗದಲ್ಲಿ ಗ್ರಂಥಾಲಯ, ಅಂತರ್ಜಾಲ ಸೌಲಭ್ಯ ಲಭ್ಯವಿವೆ. ವಿಧ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪೂರಕವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ವಿಷೇಶ ಉಪನ್ಯಾಸ ಏರ್ಪಾಡು ಮಾಡುವುದರ ಜೊತೆಗೆ ಪ್ರತಿವರ್ಷ ಕೈಗಾರಿಕಾ ಪ್ರವಾಸ, ವಸ್ತು ಪ್ರದರ್ಶನವನ್ನು ಏರ್ಪಡಿಸಿಕೊಂಡಿ ಬರಲಾಗುತ್ತಿದೆ.

ಪ್ರಾಣಿಶಾಸ್ತ್ರ ವಿಭಾಗ:
ಈ ವಿಭಾಗವೂ ಕೂಡ ೧೯೬೨ ರಲ್ಲಿ ಪ್ರಾರಂಭವಾಯಿತು. ವಿಭಾಗವು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಜೀವಶಾಸ್ತ್ರ, ಪ್ರಾಣಿಶಾಸ್ತ್ರ, ಪರಿಸರಜೀವಶಾಸ್ತ್ರ ಗಳಲ್ಲಿ ವಿಶೇಷ ಜ್ಞಾನ ನೀಡುತ್ತಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ಚರ್ಚೆ ಹಾಗು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಂಡು ಕಲಿಕೆಯನ್ನು ಸುಲಭಗೊಳಿಸಿಕೊಂಡಿದ್ದಾರೆ.ಅಲ್ಲದೆ ವಿವಿಧ ಪರಿಕಲ್ಪನೆ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸುತ್ತಾ, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜುಗೊಳಿಸುತ್ತಾರೆ.

ಪಠ್ಯದ ಜೊತೆಗೆ ಸಮರ್ಥ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಏರ್ಪಡಿಸಿ ವಿದ್ಯಾರ್ಥಿಗಳು ತಮ್ಮ
ಜ್ಞಾನ ವೃಧ್ಧಿ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಇಂಬುನೀಡುತ್ತಾರೆ.ಪ್ರಾಣಿಮಾದರಿ ಸಂಗ್ರಹಣೆಗೆಂದು ಕರಾವಳಿ ಪ್ರದೇಶಗಳಿಗೆ ವಿದ್ಯಾರ್ಥಿ ಗಳನ್ನು ಕರೆದೊಯ್ಯುತ್ತಾರೆ.

ವಿಭಾಗದವರೆಲ್ಲರ ಸಹಕಾರದಿಂದ ಅತ್ಯುತ್ತಮ ಪ್ರಾಣಿಸಂಗ್ರಹಾಲಯವಿದ್ದು ಎರಡುಸಾವಿರಕ್ಕೂಹೆಚ್ಚು ಸಂರಕ್ಷಿತ ಪ್ರಾಣಿಗಳಮಾದರಿಗಳಿವೆ.ಇಲ್ಲಿ ಪಳೆಯುಳಿಕಗಳ ಸಂಗ್ರಹ, ಮಾನವನ ಅಸ್ಥಿಪಂಜರ, ಅಪರೂಪದ ಸಯಾಮಿ ಅವಳಿಗಳು, ಡೈನೋಸಾರ್ ಮಾದರಿಗಳು ಕಾಣಲು ಸಿಗುತ್ತವೆ.

ಸಸ್ಯಶಾಸ್ತ್ರ ವಿಭಾಗ:
ಈ ವಿಭಾಗವೂ ೧೯೬೨ರಲ್ಲಿ ಪ್ರಾರಂಭವಾಯಿತು. ಈ ವಿಭಾಗವೂ ಕೂಡ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವಿಶೇಷ ಉಪನ್ಯಾಸಗಳು, ಪರಿಸರ ತಿಳುವಳಿಕೆಗೆ ಕ್ಷೇತ್ರ ಪ್ರವಾಸ ಏರ್ಪಡಿಸುವುದು ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ. ಈ ವಿಭಾಗವೂ ಕೂಡ ವಿಶ್ವವಿದ್ಯಾಲಯ ಮಟ್ಟದಲ್ಲೂ ಸಿಗದಂತಹ ಅತಿ ಅಪರೂಪ ಎನ್ನಬಹುದಾದ ಸಸ್ಯಸಂಗ್ರಹಾಲಯವನ್ನು ಕಾಪಾಡಿಕೊಂಡು ಬಂದಿದೆ.

ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರ ವಿಭಾಗಗಳು ಸೇರಿ ಯು.ಜಿ.ಸಿ.ಪ್ರಾಯೋಜಿತ "ಪರಿಸರ ಸಂರಕ್ಷಣೆಯಲ್ಲಿ ಜೈವಿಕ ತಂತ್ರಜ್ಞಾನ ದ ಪಾತ್ರ" ವಿಷಯದ ಮೆಲೆ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಸಿದ್ದು ವಿಭಾಗಗಳ ಹೆಗ್ಗಳಿಕೆ.
ಈ ವಿಭಾಗಗಳು ಜಂಟಿಯಾಗಿ ಸೇರಿ ಐ.ಎ.ಎಸ್, ಕೆ.ಎ.ಎಸ್. ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತೆ ಪರಿಚಯಾತ್ಮಕ ಉಪನ್ಯಾಸವನ್ನು ಈ ವರ್ಷ ನಡೆಸಿದರು.

ವಿದ್ಯುನ್ಮಾನ ವಿಭಾಗ:
ಈ ವಿಭಾಗವು ೧೯೮೬ರಲ್ಲಿ ಭೌತಶಾಸ್ತ್ರ ಹಾಗೂ ಗಣಿತಶಾಸ್ತ್ರ ವಿಷಯಗಳೊಟ್ಟಿಗಿನ ಸಂಯೋಜನೆಯಾಗಿ ಪ್ರಾರಂಭವಾಯಿತು. ೨೭ ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ, ಮುಂದಿನ ವರ್ಷ ೫೪ ವಿದ್ಯಾರ್ಥಿಗಳು ಸೇರ್ಪಡೆಯಾದರು. ಈ ಸಂಯೋಜನೆಗೆ ೮೦ವಿದ್ಯಾರ್ಥಿಗಳು ಸೇರಿಕೊಳ್ಳಬಹುದಾಗಿದೆ.

ವಿಭಾಗವು ಅತ್ಯುತ್ತಮ ಅಂದರೆ ಬೆಂಗಳೂರು/ತುಮಕೂರು ವಿವಿಯಲ್ಲಿಯೂ ಇರದಂತಹ ಎರಡು ಸುಸಜ್ಜಿತ ಪ್ರಯೋಗಾಲಯಗಳನ್ನು ಹೊಂದಿದೆ. ಇದಲ್ಲದೆ ವಿಭಾಗದಲ್ಲಿ ೬೦ಪುಸ್ತಕಗಳ ಗ್ರಂಥಾಲಯ, ಅಂತರ್ಜಾಲ ಸಂಪರ್ಕವಿರುವ ೨೦ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ಲಭ್ಯವಿವೆ.

ಹಿರಿಯ ವಿದ್ಯಾರ್ಥಿಗಳುಖಿಅS, ತಿiಠಿಡಿo, ಊP, ಐಚಿಟಿಜ ಖಿ ಮುಂತಾದ ಪ್ರಖ್ಯಾತವಾದ ಕಂಪನಿಗಳಲ್ಲಿ ಉನ್ನತ ಸ್ಥಾನಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವಿಭಾಗದಲ್ಲಯೂ ಸಹ ಅಧ್ಯಾಪಕರು ಅಧ್ಯಾಪನದ ಜೊತೆಗೆ ಸಂಶೋಧನೆ ಕೈಗೊಂಡಿದ್ದಾರೆ. ಡಾ. ಚಿತ್ತರಂಜನ್ ರೈ ರವರ ೭ಸಂಶೋಧನಾ ಪ್ರಬಂಧಗಳು ರಾಷ್ಟ್ರೀಯ/ಅಂತರ್ರಾಷ್ಟ್ರೀಯ ಜರ್ನಲ್ಗಳಲ್ಲಿ ಪ್ರಕಟವಾಗಿವೆ. ಅಲ್ಲದೆ ಅವರು ೧೮ ಪ್ರಬಂಧಗಳನ್ನು ರಾಜ್ಯ,ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಸೆಮಿನಾರ್, ಕಾನ್ಫರೆನ್ಸ್ ಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಪ್ರೊ.ವಿನೋದ್ ಫಡ್ಕೆಯವರು ಸಂಶೋಧನೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಕನ್ನಡ ದಿನಪತ್ರಿಕೆಗಳಲ್ಲಿ ಲೇಖನ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. "ಸ್ಟೀಫನ್ ಹಾಕಿಂಗ್ಸ್" ಮತ್ತು "ಬ್ಯಾಟರಿ ಲೋಕ" ಎಂಬ ಎರಡು ಪುಸ್ತಕಗಳ ಲೇಖಕರಿವರು.

ವಿಭಾಗವು ವಿದ್ಯಾರ್ಥಿಗಳಿಗೆ ಸರ್ವರೀತಿಯ ಬೆಳವಣಿಗೆಗೆ ಶ್ರಮಿಸುತ್ತಿದೆ.
ಗಣಿತ ಶಾಸ್ತ್ರ ವಿಭಾಗ: ಈ ವಿಭಾಗವೂ ೧೯೬೨ ರಲ್ಲಿ ಪ್ರಾರಂಭವಾಗಿ ಅತ್ಯುತ್ತಮ ಅಧ್ಯಾಪಕರ ಸೇವೆಯಿಂದ ಅತಿ ಶಿಸ್ತಿನ ವಿಭಾಗವೆಂದು ಹೆಸರು ಪಡೆದು ಬೆಳೆಯಿತು. ಪಿ.ಸಿ.ಎಂ, ಪಿ.ಎಂ.ಇ, ಪಿ.ಎಂ.ಸಿಎಸ್.ಸಂಯೋಜಿತ ವಿದ್ಯಾರ್ಥಿಗಳು ಈ ವಿಷಯವನ್ನು ಅಧ್ಯಯನ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಉನ್ನತ ವ್ಯಾಸಂಗಕ್ಕೆ ಹೋಗುತ್ತಿದ್ದಾರೆ. ಈ ವಿಭಾಗವೂ ಸಹ ಯು.ಜಿ.ಸಿ ಪ್ರಾಯೋಜಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಸಿದ ಅನುಭವ ಹೊಂದಿದೆ.
ಸದ್ಯ ಡಾ. ಜಗದೀಶ್ ರವರು ಸಂಶೋಧನೆ ಮುಗಿಸಿ ವಿಭಾಗದ ಮುಖ್ಯಸ್ಥರಾಗಿ ಅಧ್ಯಾಪನ ಮುಂದುವರಿಸಿದ್ದಾರೆ.
ವಿಭಾಗವು ಕಂಪ್ಯೂಟರ್ ಆಧಾರತ ಎರಡು ಪ್ರಯೋಗಾಲಯ ಹೊಂದಿದೆ.

ಭಾಷಾವಿಭಾಗಗಳು:
ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಲಭ್ಯವಿರುವ ಭಾಷೆಗಳೆಂದರೆ ಇಂಗ್ಲಿಷ್ (ಕಡ್ಡಾಯ ಪತ್ರಿಕೆ), ಕನ್ನಡ,ಸಂಸ್ಕೃತ, ಹಿಂದಿ.ಈ ಎಲ್ಲ ವಿಭಾಗಗಳೂ ಕೂಡ ೧೯೬೨ರಲ್ಲಿಯೇ ಪ್ರಾರಂಭವಾದವು. ಈ ವಿಭಾಗಗಳ ಅಧ್ಯಾಪಕರು ಕಾಲೇಜಿನ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಜೊತೆಗೆ ವಿದ್ಯಾರ್ಥಿಗಳಲ್ಲಿ ಭಾಷಾ ಹಾಗೂ ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳಲು ತರಬೇತಿಯನ್ನು ನೀಡುತ್ತಾರೆ. ಆಂಗ್ಲ ಭಾಷೆಯ ಕಲಿಕೆಯನ್ನು ಹೆಚ್ಚು ಆಪ್ತವಾಗಿಸಲು ಚಲನಚಿತ್ರ ವೀಕ್ಷಣೆ ಮತ್ತು ಅದರ ಮೇಲಿನ ಚರ್ಚೆಯನ್ನು ಏರ್ಪಡಿಸುತ್ತಾರೆ. ಭಾಷಾ ವಿಭಾಗಗಳು ಜಂಟಿಯಾಗಿ ಆಯೋಜಿಸಿರುವ ಯುಜಿಸಿ ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣಗಳು: ೧) "Exploring the concerns of recent Kannada Cinema"
೨) Constructing womanhood in Kannada And Hindi Films.

ಕಾಲೇಜಿನಲ್ಲಿ ಸಕ್ರಿಯವಾಗಿರುವ ವಿವಿಧ ಸಂಘಗಳು/ಕೋಶಗಳು:
ವಿಜ್ಞಾನ ವೇದಿಕೆ, ಮಹಿಳಾ ಸಬಲೀಕರಣ ಕೋಶ/ಮಹಿಳಾ ಕುಂದುಕೊರತೆ ವಿಭಾಗ, ರಾಗಿಂಗ್ ತಡೆ ಕೋಶ, ಯುವ ರೆಡ್ ಕ್ರಾಸ್, ಎನ್. ಎಸ್. ಎಸ್. ಎನ್.ಸಿ.ಸಿ., ಉದ್ಯೋಗ ತರಬೇತಿ ಕೋಶ, ಇಕೋ ಕ್ಲಬ್, ಸ್ಕೌಟ್ಸ್ ಅಂಡ್ ಗೈಡ್ಸ್, ರೆಡ್ ರಿಬ್ಬನ್ ಕ್ಲಬ್ ಇತ್ಯಾದಿ.

ಈ ಎಲ್ಲಾ ಸಂಘಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ.